Friday, June 19, 2009

food

ಊಟ ಬಲ್ಲವನಿಗೆ ರೋಗವಿಲ್ಲ,ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ನಾಣ್ನುಡಿ ಎಷ್ಟು ಸತ್ಯ ಅಂತ ಅನ್ಸಿತು ಇವತ್ತು ಮದುವೆಯೊಂದಕ್ಕೆ ಹೋಗಿದ್ದಾಗ.
ನಾವೇನು ತಪ್ಪು ಮಾಡ್ತಿದ್ದೇವೆ ಊಟದ ವಿಷಯದಲ್ಲಿ ಅಂತ ತುಂಬಾ ದಿನದಿಂದ ಯೋಚನೆ ಮಾಡ್ತಿದ್ದೆ.
ನಮ್ಮ ಜೀವನದಲ್ಲಿ ಸಾಮಾನ್ಯವಾಗಿ ಒಂದು ದಿನಚರಿ ಅಂತ ರೂಢಿ ಮಾಡಿಕೊಂಡಿರುತ್ತೇವೆ.ಬೆಳಿಗ್ಗಿನ ತಿಂಡಿ ಮಧ್ಯಾನ್ನದ ಊಟ ಸಂಜೆಯ ತಿಂಡಿ ರಾತ್ರಿಯ ಊಟ ಇಷ್ಟು ಹೆಚ್ಚಿನವರ ಆಹಾರದ ಕ್ರಮವಾಗಿರಬಹುದು.
ಯಾವುದೇ ಸಮಾರಂಭಕ್ಕೆ ಹೋದಾಗ ಬೆಳಿಗ್ಗೆ ನಮ್ಮ ತಿಂಡಿಯಲ್ಲಿ ಗಡಿಬಿಡಿಯಿಂದಾಗಿ ವ್ಯತ್ಯಾಸವಾಗಬಹುದು.ಮಧ್ಯಾನ್ನ ಊಟದ ಹೊತ್ತು ತುಂಬಾ ಮೀರಿ ಹೋಗುವ ಸಾಧ್ಯತೆಯೇ ಹೆಚ್ಚು.
ನಮ್ಮ ಶರೀರ ಮೊದಲೇ ನಮ್ಮ ದಿನಚರಿಗೆ ಒಗ್ಗಿ ಹೋಗಿರುತ್ತದೆ.ನಮ್ಮ ದಿನದ ಊಟದ ಹೊತ್ತಿಗೆ ಹಸಿವೆ ಆಗಿಯೇ ಆಗುತ್ತೆ.ನಮ್ಮ ಹೊಟ್ಟೆಯಲ್ಲಿ ಜೀರ್ಣ ರಸದ ಉತ್ಪತ್ತಿ ಪ್ರಾರಂಭವಾಗಿರುತ್ತದೆ.ಜೀರ್ಣ ರಸದ ಹೆಚ್ಚಿನ ಪಾಲು ತೀವ್ರವಾದ ಆಮ್ಲದಿಂದ ಕೂಡಿರುವ ಕಾರಣ ಆ ಹೊತ್ತಿಗೆ ಊಟ ಆಗದಿದ್ದರೆ ಹೊಟ್ಟೆಯ ಒಳ ಪದರ ಕೊರೆತ ಶುರುವಾಗಿ ಹುಣ್ಣಿಗೆ ಕಾರಣವಾಗಬಹುದು.ಅದಿಲ್ಲವಾದರೂ ಹುಳಿ ತೇಗು ,ಅಜೀರ್ಣ ಇತ್ಯಾದಿ ಸಮಸ್ಯೆಗಳು ಉಂಟಾಗಬಹುದು.
ಹೊತ್ತು ತಪ್ಪಿದರೆ ಜೀರ್ಣ ರಸ ಸಣ್ಣ ಕರುಳಿಗೆ ದಾಟಿ ಬಿಡಬಹುದು.ಆಮೇಲೆ ತಿಂದ ಆಹಾರ ಹೊಟ್ಟೆಯಲ್ಲಿ ಹುಳಿ ಬಂದು ಅಜೀರ್ಣವಂತೂ ಕಟ್ಟಿಟ್ಟ ಬುತ್ತಿ.
ಸರಿ,ತಡವಾಗಿದ್ದೇನೋ ಆಯಿತು,ಊಟದ ವಿಚಾರ ನೋಡಿ.
ಸ್ವಲ್ಪ ಆನ್ನ,ಸ್ವಲ್ಪ ಸಾರು,ಸಾಂಬಾರು,ಹುಳಿ,ಪಾಯಸ,ಒಂದೆರಡು ಹೋಳಿಗೆ ಅಥವಾ ಇನ್ನೇನೋ ಸಿಹಿ ತಿಂಡಿ,ಕೊನೆಗೊಂದಿಷ್ಟು ಮೊಸರನ್ನದ ಜೊತೆಗೆ ಒಂದಿಷ್ಟು ಉಪ್ಪಿನಕಾಯಿ.ಅಲ್ಪ ಯೋಚನೆ ಮಾಡಿ, ಇವೆಲ್ಲಾ ಸೇರಿದರೆ ಹೊಟ್ಟೆಯೊಳಗೆ ಏನಾಗಬಹುದು!
ಒಂದು ಬಟ್ಟಲಿನಲ್ಲಿ ಇವನ್ನೆಲ್ಲ ಮಿಶ್ರ ಮಾಡಿ ನೋಡಿ,ಆಮೇಲೆ ನೀವು ಊಟ ಮಾಡಿದರೆ ಹೇಳಿ!
ಈಗಂತೂ buffet ಇಲ್ಲದ ಸಮಾರಂಭ ಇಲ್ಲವೆಂದೇ ಹೇಳಬಹುದು.ಹಳ್ಳಿಯಲ್ಲಿ ಇರಬಹುದು ಅಪರೂಪಕ್ಕೊಂದು.ಅದು ಅಷ್ಟು ತೊಂದರೆ ಕೊಡಲಾರದು.
ಹಾಗಾಗಿ ನಾವು ನಮಗೆ ಅಂದರೆ ನಮ್ಮ ಶರೀರಕ್ಕೆ ಬೇಕಾದದ್ದು ಬೇಕಾದಷ್ಟೇ ತಿನ್ನಲು ಯಾವುದೇ ಅಡ್ಡಿ ಇರಲಾರದಷ್ಟೇ.
ನಮ್ಮ ನಾಲಗೆಯ ನಿಗ್ರಹ ನಮ್ಮ ಕೈಯಲ್ಲಿದೆ.
ಕೊನೆಗೊಂದು ಮಾತು.ಊಟ ಮಾಡಿ ಐಸ್ಕ್ರೀಂ ತಿನ್ನಲೇ ಬೇಡಿ.ನಿಮ್ಮನ್ನು ಕರೆದವರ ಮನಸ್ಸಿಗೆ ನೋವೇನೂ ಆಗುವುದಿಲ್ಲ.ಅವರೂ ಇದೇ ಸಮಸ್ಯೆ ಒಂದಲ್ಲ ಒಂದು ಬಾರಿ ಎದುರಿಸಿರುತ್ತಾರೆ!

No comments:

About Me

My photo
Puttur, Karnataka, India
Medical doctor,arrogant,self centred,can be very helping. Concerned about the falling standards in ethics.Advocate discretion in lifestyle instead of regretting after the fact